Saturday, January 14, 2012

ಓದಿದ್ದು

ಎಲ್ಲರಿಗಾಗಿ ವೇದ ಇರುವುದು! 

ಯಜುರ್ವೇದ ೨೬.೨
ಯಥೇಮಾಂ ವಾಚಂ ಕಾಲ್ಯಾಣೀಂ ಆವದಾನಿ ಜನೇಭ್ಯ: |
ಬ್ರಹ್ಮರಾಜನ್ಯಾಭ್ಯಾಂ ಶೂದ್ರಾಯಚಾರ್ಯಾಯ ಚ ಸ್ವಾಯ ಚಾರಣಾಯ ಚ |
ಪ್ರಿಯೋ ದೇವಾನಾಂ ದಕ್ಷಿಣಾಯೈ ದಾತುರಿಹ ಭೂಯಾ ಸಮಯಂ
ಮೇ ಕಾಮ: ಸಮೃಧ್ಯತಾಮುಪ ಮಾದೋ ನಮತು||

ಅರ್ಥ:
ಇಹ= ಈ ಲೋಕದಲ್ಲಿ
ಯಥಾ ದೇವಾನಾಂ ದಕ್ಷಿಣಾಯೈದಾತು: ಭೂಯಾಸಮ್= ವಿದ್ವಜ್ಜನರಿಗೂ, ಉದಾರಾತ್ಮರಿಗೂ,ಆಧ್ಯಾತ್ಮಿಕ ಶಕ್ತಿಯ ದಾತೃವಾಗುವಂತೆ
ಇಮಾಂ ಕಲ್ಯಾಣೀಂ ವಾಚಮ್ = ಈ ಕಲ್ಯಾಣಕಾರಿಯಾದ ವಾಣಿಯನ್ನು
ಜನೇಭ್ಯ: =ಮಾನವರೆಲ್ಲರ ಸಲುವಾಗಿ
ಬ್ರಹ್ಮರಾಜನ್ಯಾಭ್ಯಾಮ್=ಬ್ರಾಹ್ಮಣ-ಕ್ಷತ್ರಿಯರಿಗಾಗಿ
ಶೂದ್ರಾಯ=ಶೂದ್ರನಿಗಾಗಿ ಚ=ಮತ್ತು
ಆರ್ಯಾಯ= ವೈಶ್ಯನ ಸಲುವಾಗಿ
ಸ್ವಾಯ=ತನ್ನವನಿಗಾಗಿ
ಚ=ಮತ್ತು[ಅದೇ ರೀತಿಯಲ್ಲಿ]
ಅರಣಾಯ=ಬೇರೆಯವನಿಗಾಗಿ
ಆವದಾನಿ=ಉಪದೇಶಿಸುತ್ತೇನೆ.
ಅಯಂ ಮೇ ಕಾಮ:= ಈ ನನ್ನ ಕಾಮನೆಯು
ಸಮೃಧ್ಯತಾಮ್=ಸಮೃದ್ಧವಾಗಲಿ
ಅದ: = ಈ ಜಗತ್ತು
ಮಾ ಉಪ ನಮತು=ನನ್ನ ಬಳಿ ನಮ್ರವಾಗಿ ಬರಲಿ
(ಯತ್= ಯಾವುದೇ = whatever ?)


http://networkedblogs.com/K2l8L
= = = = = = = = = = = = = = = = = = = = = = = = = = = =

ತಚ್ಛಕ್ಷುರ್ದೇವಹಿತಂ ಪುರಸ್ತಾಚ್ಛುಕ್ರಮುಚ್ಚರತ್ | 
ಪಶ್ಶೇಮ ಶರದಃ ಶತಂ ಜೀವೇಮ ಶರದಃ ಶತಂ 
ಶೃಣುಯಾಮ ಶರದಃ ಶತಂ ಪ್ರ ಬ್ರವಾಮ ಶರದಃ ಶತಮ
ದೀನಾ ಸ್ಯಾಮ ಶರದಃ ಶತಂ ಭೂಯಶ್ಚ ಶರದಃ ಶತಾತ್ || (ಯಜು.೩೬.೨೪)

[ಶುಕ್ರಮ್] ಜ್ಯೋತಿಸ್ವರೂಪನೂ, ಶಕ್ತಿಶಾಲಿಯೂ, [ತತ್ ದೇವಹಿತಂ ಚಕ್ಷುಃ] ವಿದ್ವಜ್ಜನರಿಗೆ, ಮಹಾತ್ಮರಿಗೆ ಪ್ರಿಯನೂ ಆದ ಆ ವಿಶ್ವದ್ರಷ್ಟಾ ಪ್ರಭುವು, [ಪುರಸ್ತಾತ್ ಉಚ್ಚರತ್] ಮನಸ್ಸಿನ ಮುಂದೆ ವಿರಾಜಿಸುತ್ತಿದ್ದಾನೆ. [ಶರದಃ ಶತಮ್] ನೂರು ವರ್ಷಗಳವರೆಗೆ [ಪಶ್ಶೇಮ] ನೋಡುತ್ತಿರೋಣ. [ಶರದಃ ಶತಮ್] ನೂರು ವರ್ಷಗಳವರೆಗೆ, [ಜೀವೇಮ] ಜೀವಿಸೋಣ. [ಶರದಃ ಶತಮ್] ನೂರು ವರ್ಷಗಳವರೆಗೆ [ಶೃಣುಯಾಮ] ಆಲಿಸುತ್ತಿರೋಣ. [ಶರದಃ ಶತಮ್] ನೂರು ವರ್ಷಗಳ ಕಾಲ [ಪ್ರಬ್ರವಾಮ] ಉತ್ತಮ ರೀತಿಯಲ್ಲಿ ಮಾತನಾಡುತ್ತಿರೋಣ. [ಶರದಃ ಶತಮ್] ನೂರು ವರ್ಷಗಳ ಕಾಲ [ಅದೀನಾಃ ಸ್ಯಾಮ] ಅದೀನರಾಗಿ, ಧೀರ-ವೀರರಾಗಿ ಜೀವಿಸಿರೋಣ. [ಶರದಃ ಶತಾತ್] ನೂರು ವರ್ಷಕ್ಕಿಂತ, [ಚ ಭೂಯಃ] ಹೆಚ್ಚು ಕಾಲ ಕೂಡ ಜೀವಿಸೋಣ. (vedajeevana.blogspot.com)

ಶ್ರೀ ಡಿ.ವಿ.ಜಿಯವರ ಈಶೋಪನಿಷತ್ತಿನಲ್ಲಿ ಇದೇ ಶ್ಲೋಕವನ್ನು ತೈತ್ತೀರೀಯಾರಣ್ಯಕ, ೪-೪೨ ಉಲ್ಲೇಖಿಸಿ ಈ ಕೆಳಗಿನ೦ತೆ ಬರೆಯಲಾಗಿದೆ.

ಪಶ್ಯೇಮ ಶರದಶ್ಯತ೦ ಜೀವೇಮ ಶರದಶ್ಯತ೦ 
ನ೦ದಾಮ ಶರದಶ್ಯತ೦ ಮೋದಾಮ ಶರದಶ್ಯತ೦ 
ಭವಾಮ ಶರದಶ್ಯತ೦ ಶ್ರುಣಣಾಮ ಶರದಶ್ಯತ೦ 
ಪ್ರಬ್ರವಾಮ ಶರದಶ್ಯತ೦ ಜೀತಾಸ್ಯಾಮ ಶರದಶ್ಯತ೦ 

= = = = = = = = = = = = = = = = = = = = = 

ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸ
ಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು, ಮಿತ್ರರ್ಗಿಂಬುಕೆಯ್ ನಂಬಿದ|
ರ್ಗೆರೆವಟ್ಟಾಗಿರು, ಶಿಷ್ಟರಂ ಪೊರೆ ಎನುತ್ತಿಂತೆಲ್ಲಮಂ ಪಿಂತೆ ತಾ
ನೆರೆದಳ್ ಪಾಲೆರೆವೆಂದು ತೊಟ್ಟು ಕಿವಿಯೊಳ್ ಲಕ್ಷ್ಮೀಧರಾಮಾತ್ಯನಾ||

ಇದು ಕ್ರಿ.ಶ. ಸುಮಾರು ೧೪೧೧ರ ಶಾಸನ ಪದ್ಯ. ವಿಜಯನಗರದ ಪ್ರೌಢ ಪ್ರತಾಪದೇವರಾಯನ ಕಾಲದಲ್ಲಿ, ಅವನ ಮಂತ್ರಿಯಾಗಿದ್ದ ಲಕ್ಷೀಧರಾಮಾತ್ಯನು ಮಹಾಗಣಪತಿಯನ್ನು ಸ್ಥಾಪಿಸಿ, ಅದಕ್ಕೆ ದತ್ತಿಯನ್ನು ಬಿಟ್ಟ ಸಂಗತಿಯನ್ನು ಹೇಳುವ ಶಾಸನವಿದು. ಲಕ್ಷೀಧರನು ಚಿಕ್ಕವನಾಗಿದ್ದಾಗ, ಅವನ ತಾಯಿಯು ತನ್ನ ಎದೆಹಾಲನ್ನು ಕುಡಿಸುತ್ತಾ, ಅವನು ಸಮಾಜಕ್ಕೆ ಎಂತೆಂತಹ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂಬ ಸದ್ವಿಚಾರಗಳನ್ನೂ ಕುಡಿಸಿದಳು. ಈ ಶಾಸನದ ಮೊದಲ ಮಾತನ್ನು ನೋಡಿ. ಕೆರೆಗಳನ್ನು ಕಟ್ಟಿಸು, ಬಾವಿಯನ್ನು ತೆಗೆಸು...ನಾಲ್ಕು ಜನರಿಗೆ ಉಪಕಾರವನ್ನು ಮಾಡು ಎಂದಿರುವಳು ಆ ಮಹಾತಾಯಿ. ಇಂತಹ ಪ್ರಾತಃಸ್ಮರಣೀಯರು ಹುಟ್ಟಿರುವ ಈ ನಾಡಿನಲ್ಲಿ ಈಗ ‘ಕೆರೆಯಂ ಕರಗಿಸು, ಕೆರೆಯಂ ಕಬಳಿಸು, ಕೆರೆಯಂ ಸದ್ದಿಲ್ಲದೆ ಮುಚ್ಚಿಸು, ಕೆರೆಯಂ ಹೇಳಹೆಸರಿಲ್ಲದಾಗಿಸು...ಎಂದೆಲ್ಲ ಬರೆಯುವಂತಹ ದುಸ್ಥಿತಿ ಒದಗಿದೆ.

- ಡಾ|ನಾ.ಸೋಮೇಶ್ವರ


http://chiyabgs.typepad.com/yakshaprashne/2009/04/03/

=============================


ರಂಗ ನಾಯಕ ರಾಜೀವ ಲೋಚನ ರಮಣನೆ ಬೆಳಗಾಯಿತೇಳೆನುತ

http://www.youtube.com/watch?v=uNTxS2KYWO4

http://www.youtube.com/watch?v=Rfc0bznjZvQ&feature=related

=============================

ಶ್ರೀ ಕೊಡ್ಲೆಕೆರೆ ಅನಂತ ಭಟ್ಟರ ತೃತೀಯ ಪುತ್ರ ಮಹಾಬಲೇಶ್ವರ ಭಟ್ಟನ ಶುಭ ಜನನ" - 
http://dipadakamba.blogspot.com.au/

=============================


ಇಷ್ಟು ದಿನ ಸಲಹಿರುವೆ ಈ ಮೂರ್ಖನನು ನೀನು
ಮುಂದೆಯು ಕೈ ಹಿಡಿದು ನಡೆಸದಿಹೇಯ
-ಬಿಎ೦ಶ್ರೀ.


(ಪಲ್ಲವಿ: ಕರುಣಾಳು ಬಾ ಬೆಳಕೆ.)


=============================




ವಿವಶವಾಯಿತು ಪ್ರಾಣ ಹಾ
ಪರವಶವು ನಿನ್ನಿ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ
ತುಡಿವುದೇ ಜೀವನ.
-ಗೋಪಾಲಕೃಷ್ಣ ಅಡಿಗ.


(ಪಲ್ಲವಿ: ಯಾವ ಮೋಹನ ಮುರಳಿ ಕರೆಯಿತೋ)




=============================
ಚಿಂತ್ಯಾಕ ಮಾಡುತ್ತಿದ್ದಿ ಚಿನ್ಮಯನಿದ್ದಾನೆ ।
ಚಿಂತರತ್ನನೆಂಬೋ ಅನಂತನಿದ್ದಾನೆ ಪ್ರಾಣಿ ಅನಂತನಿದ್ದಾನೆ,ಅನಂತನಿದ್ದಾನೆ ॥
~
~
ಹಿಂದೆ ನಿನ್ನ ಸಲಹಿದರ್ಯಾರೋ ಮುಂದೆ ನಿನ್ನ ಕೊಲ್ಲುವರ್ಯಾರೋ 
ಅಂದಿಗಿಂದಿಗೆಂದಿಗೂ ಗೋವಿಂದನಿದ್ದಾನೆ ।
~
~
-ಪುರಂದರದಾಸರು


==============================

ಶಿವಾಪರಾಧ ಕ್ಷಮಾಪಣಾ ಸ್ತೋತ್ರ (ಶ್ರೀ ಶ್ರೀ ಶಂಕರಾಚರ್ಯ ವಿರಚಿತ)




ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಂ |
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ ||


ದೇಹ, ಕೈ ಕಾಲುಗಳಿ೦ದಾಗಲಿ, ಕಣ್ಣು-ಕಿವಿಗಳಿ೦ದಾಗಲಿ ಕರ್ಮದಿ೦ದಾಗಲಿ  ಅಥವ ಮನಸಿನಿ೦ದ (ದೇಹ, ಅ೦ಗಾ೦ಗ, ಮನಸು, ಕರ್ಮ ಇತ್ಯಾದಿ) ತಿಳಿದೋ ತಿಳಿಯದೆಯೋ ಮಾಡಿದ ಎಲ್ಲ ಅಪರಾಧಗಳನ್ನು ಕ್ಷಮಿಸು. ಕರುಣಾಸಾಗರನಾದ ಮಹಾದೇವ ಶ೦ಭುವಿಗೆ ಜಯವಾಗಲಿ. 


".....ಕ್ಷಂತವ್ಯೋ ಮೇSಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ...."


http://oppanna.com/mantra/shivaparadha-kshamapana-storta


==============================

ಹ್ಯಾ೦ಗೆ ಮಾಡಲಯ್ಯ ಕೃಷ್ಣ ಹೋಗುತಿದೆ ಆಯುಷ್ಯ
ಮ೦ಗಳಾ೦ಗ ಭವಭ೦ಗ ಬಿಡಿಸಿ ನಿನ್ನ ಡಿ೦ಗರಿಗನ ಮಾಡು ಅನ೦ಗಜನಕ
(ಡಿ೦ಗರಿಗ=ಸೇವಕ)

ಯೇಸು ಜನುಮದ ಸುಕೃತದ ಫಲವೋ ತಾನು ಜನಿಸಲಾಗಿ
ಭೂಸುರದೇಹದ ಜನ್ಮವು ಯನಗೆ ಸ೦ಭವಿಸಿದೆಯಾಗಿ
ಮೋದತೀರ್ಥ ಮತ ಚಿನ್ಹಿತನಾಗದೇ ದೋಷಕೆ ಒಳಗಾಗಿ
ಲೇಶಸಾಧನವ ಕಾಣದೇ ದುಸ್ಸಹವಾಸದಿ೦ದಲೇ ದಿನ ದಿನ ಕಳೆದೆ.
[ಮೋದತೀರ್ಥ = ಆನ೦ದತೀರ್ಥ=ಮಧ್ವಾಚಾರ್ಯ]

ಶಶಿಮುಖ ಕನಕದ ಆಶೆಗೆ ಬೆರೆತು ವಸುಪತಿ ನಿನ್ನಡಿಯ
ಹಸನಾಗಿ ನಿನ್ನ ನೆನೆಯದೆ ಕೃಪೆಯ ಗಳಿಸದೆ ಕೆಟ್ಟೆನೆಯ್ಯ
ನಿಶೆಹಗಲು ಸ್ಥಿರವೆ೦ದು ತನುವನು ಪೋಷಿಸಲಾಶಿಸಿ ಜೀಯ
ಕುಸುರಿದೆ ನೆಲವೊ ಸರ್ವಕಾಲ ನಿನ್ನೊಡೆತನಯೆ೦ಬುವ ಬಗೆಯನು ಅರಿಯದೆ

ನೆರೆನ೦ಬಿದ ಪಾವಟಿಗಳು ಎಲ್ಲ ಸರಿದು ಹೋದವಲ್ಲ
ಮರಳಿ ಈ ಪರಿ ಜನುಮವು ಬರುವ ಭರವಸೆಯ೦ತು ಇಲ್ಲ.
ಪರಿಪರಿ ವಿಷಯದ ಆಶೆಯು ಯನಗೆ ಕಿರಿದು ಆಯಿತಲ್ಲ
ಹರಿಯೇ ಜಗದಿ ನೀನೊಬ್ಬನಲ್ಲದೇ ಪೊರೆವರಿನ್ಯಾರು ಇಲ್ಲವಲ್ಲ.
{ಪಾವಟಿಗಳು=ಮೆಟ್ಟಿಲುಗಳು=ಬೆಟ್ಟವೇರ­ುವ ಸ್ತಳದಲ್ಲಿರುವ ಸಣ್ಣ ತ೦ಗುದಾಣ ??.}

ಅವನಿ ಒಳಗೆ ಪುಣ್ಯ ಕ್ಷೇತ್ರ ಚರಿಸುವ ಹವಣಿಕೆ ಯೆನಗಿಲ್ಲ
ಪವನಾತ್ಮಕ ಗುರುಮಧ್ವ ಶಾಸ್ತ್ರದ ಪ್ರವಚನ ಕೇಳಲಿಲ್ಲ
ತವಕದಿ೦ದ ಗುರುಹಿರಿಯರ ಸೇವಿಸಿ ಅವರ ಒಲಿಸಲಿಲ್ಲ
ರವಿನ೦ದನ ಕೇಳಿದರುತ್ತರ ಕೊಡೆ ವಿವರಸರಕು ಒ೦ದಾದರಿಲ್ಲ

ಭಾಗವತರೊಡಗೂಡಿ ಉಪವಾಸ ಜಾಗರ ಒ೦ದಿನ ಮಾಡಲಿಲ್ಲ
ರಾಗದಿ ಶುಕಮುನಿ ಪೇಳ್ದ ಹರಿಕತೆ ಸ೦ಯೋಗಯೆ೦ಬುದಿಲ್ಲ
ನೀಗುವ೦ತ ಭವಭಯವ ಬಕುತಿ ವೈರಾಗ್ಯವೆ೦ಬೊದಿಲ್ಲ
ಯೋಗಿವ೦ದ್ಯ ಗೋಪಾಲ ವಿಠಲ ತಲೆಬಾಗಿ ನಿನ್ನನೇ ಬೇಡಿಕೊ೦ಬೆ.

http://www.youtube.com/watch?v=m-5FOzuzSi0

==================================